Bhartiya Bhasha, Siksha, Sahitya evam Shodh

  ISSN 2321 - 9726 (Online)   New DOI : 10.32804/BBSSES

Impact Factor* - 6.2311


**Need Help in Content editing, Data Analysis.

Research Gateway

Adv For Editing Content

   No of Download : 49    Submit Your Rating     Cite This   Download        Certificate

ಷಟಸ್ಥಲ ಸಿದ್ದಾಂತದ ಹಿರಿಮೆ ( DIGNITY OF SIX STAGES THEORY IN VACHANAS )

    1 Author(s):  SRI. MALLIKARJUN KANNESHWAR

Vol -  2, Issue- 1 ,         Page(s) : 43 - 47  (2011 ) DOI : https://doi.org/10.32804/BBSSES

Abstract

ಕನ್ನಡನಾಡಿನಲ್ಲಿ ಹನ್ನೆರಡನೆಯ ಶತಮಾನದಲ್ಲಿ ಆಧ್ಯಾತ್ಮಿಕ ಸುಗ್ಗಿಯ ಕಾಲವು ಗತಿಸಿ ಹೋಗಿದ್ದು ಇತಿಹಾಸದಲ್ಲಿ ಚಿರಸ್ಮರಣೀಯವಾಗಿದೆ. ಆಗ ಬಸವಾದಿ ಶ್ರೇಷ್ಠ ಶಿವಶರಣರು ಕರ್ನಾಟಕದ ಸಾಹಿತ್ಯ, ಸಮಾಜ, ಧರ್ಮ, ಸಂಸ್ಕøತಿಗಳ ಸರ್ವಾಂಗೀಣ ಉನ್ನತಿಯನ್ನುಂಟುಮಾಡಿದರು. ಅಂದು ಸಮಗ್ರ ನಾಡಿನ ಜೀವನವು ಉನ್ನತ ಮಟ್ಟಕ್ಕೆ ಏರಿತು. ಮೇಲು-ಕೀಳು ಇಲ್ಲದ, ಸೋದರಭಾವದ ಸ್ವಭಾವದ ಸಮಾಜರಚನೆ, ಭಕ್ತಿ ಪ್ರಧಾನವಾದ ಧರ್ಮ ಪ್ರಚಾರ, ನೀತಿ-ಸದಾಚಾರಗಳ ಪ್ರತಿಪಾದನೆ, ವ್ಯಕ್ತಿಯ ಹಾಗೂ ಸಮಾಜದ ಉದ್ದಾರ ಮೊದಲಾದ ಉದಾತ್ತ ಉದ್ದೇಶಗಳು ಆಗಿನ ಶಿವಶರಣರ ಮುಂದೆ ಇದ್ದುವು. ಆಗ ಕೇವಲ ಒಂದು ಮತ ಪ್ರಸಾರವು ಗುರಿಯಾಗಿರದೆ, ಮಾನವಕುಲದ ಉದ್ಧಾರವೇ ಅವರ ಹಿರಿಯ ಗುರಿಯಾಗಿತ್ತು. ಇದನ್ನು ಸಾಧಿಸುವಾಗ ಸಾಮಾನ್ಯ ಜನತೆಗೆ ಶಿವಶರಣರು ಬೋಧಿಸಬೇಕಾಗಿತ್ತು. ಆ ಬೋಧನೆಯ ಪರಿಣಾಮವಾಗಿ ಶಿವಶರಣರ ವಚನಗಳು ಉದಯವಾಗಿ, ಕನ್ನಡಸಾಹಿತ್ಯದ ಶ್ರೀಮಂತಿಕೆ ವರ್ಧಿಸಿತು, ಶ್ರೀ ಎಂ. ಆರ್. ಶ್ರೀಯವರು ಹೇಳಿದಂತೆ- “ ವಚನಗಳು ಕನ್ನಡ ನಾಡಿನ ಉಪನಿಷತ್ತುಗಳು, ವಚನಕಾರರು ಕರ್ನಾಟಕದ ರಸಋಷಿಗಳು.” ನೀತಿ, ತತ್ವಜ್ಞಾನ ಹಾಗೂ ಕಾವ್ಯ ಇವುಗಳ ತ್ರಿವೇಣೀಸಂಗಮವನ್ನು ನಾವು ವಚನಸಾಹಿತ್ಯದಲ್ಲಿ ಕಾಣುತ್ತೇವೆ. ಡಾ. ರಂ ಶ್ರೀ. ಮುಗಳಿಯವರು ಹೇಳಿದಂತೆ- “ವಚನ ಸಾಹಿತ್ಯ ಪಾಂಡಿತ್ಯಪ್ರತಿಭೆಗಳ ಸಂಯೋಗದಿಂದ ಉಂಟಾದ ಗ್ರಂಥ ಸಾಹಿತ್ಯವಲ್ಲ; ಅನುಭಾವಿಗಳ ಆತ್ಮಮಥನದಿಂದ ಹೊರಹೊಮ್ಮಿದ ಮಥನ ಸಾಹಿತ್ಯ”ಎಂದರು. ಈ ಕಾಲದಲ್ಲಿ ಚೆನ್ನ ಬಸವಣ್ಣನವರು ವಿಶೇಷವಾಗಿ ಷಟಸ್ಥಲಸಿದ್ದಾಂತವನ್ನು ವಿವರವಾಗಿ ನಿರೂಪಿಸಿ ಮಹದುಪಕಾರ ಮಾಡಿದ್ದಾರೆ. ಮಹಾದಾರ್ಶನಿಕರಾದ ಚೆನ್ನಬಸವಣ್ಣನವರು ಈ ಸಿದ್ಧಾಂತವನ್ನು ಪ್ರತಿಪಾದಿಸಿ “ಷಟಸ್ಥಲ ಸಿದ್ಧಾಂತ ಚಕ್ರವರ್ತಿ”ಎನಿಸಿದರು.

*Contents are provided by Authors of articles. Please contact us if you having any query.






Bank Details